Wednesday, December 2, 2009

ಕುಂದಾ ನಗರಿಯ ಕಂದಾ


ಬೆಳೆಯುವ ಸಿರಿ ಮೊಳಕೆಯಲ್ಲಿ ಈ ಗಾದೆ ನೀವು ಕೇಳಿಯೇ ಇರುತ್ತಿರಿ ಆದರೆ ಬೇಳೆಯುತ್ತಲೇ ಒಂದೇ ವರ್ಷದಲ್ಲಿ ೩ ದಾಖಲೆ ಮಾಡಿದ ಪೋರಧಿರನ ಹೆಸರು ಅಭಿಷೆಕ ನವಲೆ. ಈತ ವಿಶ್ವದಾಖಲೆ ಮಾಡಿದಾಗ ಕೇವಲ ೩ನೇ ತರಗತಿಯಲ್ಲಿ ಇದ್ದ .ನಂಬಲು ಸಾಧ್ಯವಿಲ್ಲ ಆದರು ಸತ್ಯ .ಈತ ಸಾಧನೆ ಮಾಡಿದದ್ದು ಸ್ಕೇಟಿಂಗನಲ್ಲಿ . ಅಭಿಷೆಕ ಜನಿಸಿದ್ದು ಡಿಸೆಂಬರ ೯ರಂದು. ತಂದೆ ಸಂಜಯ ಸದಾಶಿವ ನವಲೆ ಮೂಲತಃ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದವರು . ಬೆಳಗಾವಿ ಸಾರಿಗೆ ಸಂಸ್ಠೆಯ ೨ನೆಘಟಕ ಬಸ್ ಚಾಲಕರಾಗಿ ಗುತ್ತಿಗೆ ಆಧಾರದ್ ಮೇಲೆ ಕಾರ್ಯನಿವ್ರ್ಯಿಸುತಿದ್ದಾರೆ .ತಾಯಿ ಸುಜಾತ ಗ್ರಹಣಿ, ಜೋತಗೆ ಉತ್ತಮ ಕ್ರೀಡಾಪಟು ಅಭಿ ಕನಿಗೆ ಬಾಲ್ಯದಿಂದಲೇ ರೋಲರ್ ಸ್ಕೇಟಿಂಗ್ ತರಬೇತಿ ನೀಡುವತ್ತ ಗಮನ ಹರಿಸಿ, ಕುಟುಂಬದ ಬೇಕು - ಬೇಡಗಳನ್ನು,ಆರ್ಥಿಕ ಮುಗ್ಗಟ್ಟನ್ನು ಬದಿಗಿರಿಸಿ ಮಗನ ಕ್ರೀಡಾ ಸಾಧನೆಗೆ ಬೆನ್ನೆಲುಬಾಗಿ ನಿಂತಿದ್ದಾರೆ.
’ಬೆಳಾಗಾವಿ ರೋಲರ್ ಸ್ಕೇಟಿಂಗ್ ಅಕಡಮಿ’ ಸೇರಿದ ಕೆಲವೇ ದಿನಗಳಲ್ಲಿ ಸ್ಕೇಟಿಂಗ್ ಮೇಲೆ ಪ್ರಭುತ್ವ ಸಾಧೀಸಿದ ಅಭಿ ಕ್, ಮುಂದಿನ ದಿನಗಳಲ್ಲಿ ಅದ್ಭುತ ಸಾಧನೆ ತೋರುವ ಕುರುಹು ಆಗಲೇ ತೋರಿದ್ದಾನೆ. ಸ್ಕೇಟಿಂಗ್ ತರಬೇತುದಾರರಾದ ಸೂರ್ಯಕಾಂತ ಹಿಂಡಲಗೇಕರ್, ಶಶಿಧರ, ವಿನಯಕ ಶಿರಿಕರ,ನವೀನ ಗೋಡಕೆ ಹಾಗೂ ವಿಶಾಲ್ ಮೊದಲಾದವರು ಗರಡಿಯಲ್ಲಿ ಪಳಗಲಾರಂಭಿಸಿದ.ಅಭಿ ಕನ ಸಾಧನೆಗಾಗಿ ನವಲೆ ದಂಪತಿ ತಮ್ಮ ಮನೆಯ ಹಕ್ಕು ಪತ್ರಗಳನ್ನೂ, ಮೈಮೇಲಿರುವ ಆಭರಣಗಳನ್ನೂ, ಸಾಲಾಕ್ಕಾಗಿ ಬ್ಯಾಂಕನಲ್ಲಿ ಅಡವಿರಿಸಿದ್ದಾರೆ. ಹೀಗೆ ಆರ್ಥಿಕ ಮುಗ್ಗಟ್ತಿನಲ್ಲೂ ದೇಶಕ್ಕೆ ಉತ್ತಮ ಆಟಗಾರನನ್ನು ಕೊಟ್ಟ ಹೆಮ್ಮೆ ಅಭಿ ಕನ ಕುಂಟುಂಬದ್ದು.
ಹೇತ್ತವರ ಪ್ರರಿಶ್ರಮದಿಂದ ೭ ವಯಸ್ಸಿನಲ್ಲಿ ೩ ವಿಶ್ವದಾಖಲೆಗಳನ್ನು ಮಾಡಿದ್ದಾನೆ.ರಾಷ್ತ್ರ ಮತ್ತು ಅಂತರಾಷ್ಟ್ರಿಯ ಮಟ್ಟದಲ್ಲಿ ಸಾಧಕನಾಗಿ ಹೋರ ಹೋಮ್ಮಿದ್ದಾನೆ.ಮಾಹಾಂತೇಶ ನಗರದ ಎವಿಎಚ್ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿ ಒದುತ್ತಿರುವ ಅಭೀ.ಶಾಲೆಯ ಆಡಳಿತಮಂಡಳಿ ಉಚಿತ ಶಿಕ್ಸಣ ನೀಡಲು ಮುಂದಾಗಿದೆ.
ಗೌರವ
ಅಭಿಷೇಕನಿಗೆ ಕರ್ನಾಟಕ ಸರಕಾರದಿಂದ ಕೋಡಲಾಗುವ ಪ್ರತಿಷ್ಠತ ಬಾಲ ಪ್ರತಿಭೆ ೨೦೦೮ ಪ್ರಶಸ್ತಿ ದೋರೆತಿದೆ .ಕರ್ನಾಟಕ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವನ ರೋಲರ್ ಸ್ಕೇಟಿಂಗ ಸಾಧನೆ ಪರಿಗಣಿಸಿ ಸಾರಕಾರದ ವತಿಯಿಂದ ಸನ್ಮಾನಿಸಿದ್ದಾರೆ . ಮೈಸೂರ ದಸಾರ ಉತ್ಸವದ ಸಂಧರ್ಭದಲ್ಲಿ ಗಣ್ಯರು ಗೌರವಿಸಿದ್ದಾರೆ.ಕೊಲ್ಲಪುರದಲ್ಲಿ ರಾಷ್ಟ್ರಮಟ್ಟದ ಬಾಲ ಸ್ಕೇಟಿಂಗ ಸ್ಪರ್ಧೆಯಲ್ಲಿ ೩ನೇಸ್ಥಾನ ಬೆಳಗಾವಿ ರೋಲರ್ ಸ್ಕೇಟಿಂಗ ಛಾಂಪಿಯನ್ ಶಿಫ್ ೨೦೦೮ -೦೯ರ ಪ್ರಶಸ್ತಿ,ಇದರ ಬೆನ್ನಲ್ಲೇ ಮೈಸೂರು ಛಾಂಪಿಯನ್ ಶಿಪ್ ೨೦೦೯ ಪ್ರಶಸ್ತಿ,ವಿಜಾಪುರದಲ್ಲಿ ೨೦೦೯ರಲ್ಲಿ ರಾಜ್ಯಮಟ್ಟದ ಆದರ್ಶ ಕ್ರೀಡಾಪಟ್ಟು ಪ್ರಶಸ್ತಿ ಅಭಿಷೇಕನ ಕೀರಿಟದ ಗರಿಗಳು .ಬೆಳಾಗಾವಿಯಲ್ಲಿ ನಡೆಸಲಾದ ಭಯೋತ್ಪಾದನೆ ವಿರೋಧಿ ಸ್ಕೇಟಿಂಗ ರಾಲಿ ಹಾಗೂ ರಕ್ತದಾನ ಮಹಾದಾನ ಎಂಬ ರಾಲಿಯಲ್ಲಿ ಭಾಗವಹಿಸುವ ಅವಕಾಶ ನೀಡಿ ಸ್ಥಳಿಯ ಸಂಸ್ಥೆಗಳು ಅಭಿಷೆಕನಿಗೆ ಗೌರವಿಸಿವೆ. ಈತನ ಸ್ಕೇಟಿಂಗ ಸಾಧನೆಗೆ ರಾಜ್ಯ .ರಾಷ್ಟ್ರದೆಲ್ಲಡೆಯಿಂದ ೯೦ಕ್ಕೂ ಹೆಚ್ಚೂ ಪ್ರಶಸ್ತಿಗಳು ಪೋರನ ಮಡಿಲಲ್ಲಿ ಇವೆ. ಆದರೂ ಅಭಿಷೆಕನಿಗೆ ತನ್ನ ಸಾಧನೆಯ ಬಗ್ಗೆ ಸಾಮಧನಾವಿಲ್ಲ .ಇನ್ನಷ್ಟು ಸಾಧಿಸುವ ಛಲ ಆತನದ್ದು. ಒಲಿಂಪಿಕ ಕ್ರಿಡೆಯಲ್ಲಿ ಭಾಗವಹಿಸುವ ತುಡಿತ ಆತನದ್ದು .
ತಂದೆ-ತಾಯಿ ಇಬ್ಬರು ಮಗನ ಸಾಧನೆ ಇನ್ನಷ್ಟು ಸಾಧಿಸಬೇಕು ಕನ್ನಡದ ಪತಾಕೆ ಜಗದಲಿ ಜಗಮಗಿಸುವಂತಾಗಲಿ ಎಂಬ ಅಭಿಲಾಷೆ ಅವರದ್ದು.ಆತನ ಸಾಧನೆಗೆ ಅಡ್ಡಿಯಾಗದಂತೆ ಎಚ್ಚರವಹಿಸಿದ್ದಾರೆ. ಇದ್ದಕ್ಕೆ ಯಾರದರು ಆರ್ಥಿಕ ನೆರವು ನೀಡಿ ಸಾಧನೇಗೆ ಇನ್ನಷ್ಟು ಪ್ರೋತ್ಸಹಿಸಿದರೆ ಛೋಲೋ ಆದಿತು.
ದಾಖಲೆ:
೧. ಬೆಂಗಳೂರನಿಂದ ಬೆಳಗಾವಿವರಗೆ ೫೪೦ಕೀಮಿ.ಅಂತರವನ್ನು ಸ್ಕೇಟಿಂಗ ಮೂಲಕ ೬ ದಿನಗಳಲ್ಲಿ ಪೋರೈಸಿ ನೂತನ ವಿಶ್ವದಾಖಲೆ

.ಆಗ ಕೇವಲ ೬ವರ್ಷ ೯ತಿಂಗಳು ೧೩ ದಿವಸ ಮಾತ್ರ. ಇದು ನಡೆದದ್ದು ೨೦೦೮ ಅಕ್ಟೋಬರ್ ತಿಂಗಳಲ್ಲಿ ಈ ಸಾಧನೆಯೋಂದಿಗೆ ಅತಿ ಕಿರಿಯ ವಯಸ್ಸಲ್ಲಿ ಅತಿ ಹೆಚ್ಚು ದೂರ ಕ್ರಮಿಸಿದ ಸ್ಕೇಟಿಂಗ ಎಂಬ ಗೌರವಕ್ಕೆ ಪಾತ್ರನಾದ .

೨.೨೦೦೯ರ ಜುಲೈ,೮.೭ ಇಂಚು ಎತ್ತರದಲ್ಲಿ ೬೨ ಅಡಿ ಉದ್ದ ಇರಿಸಲಾಗಿದ್ದ ಕಬ್ಬಿಣದ ಸಳಿಗಳ ನಡುವೆ ನುಗ್ಗಿ ಕೆವಲ ೧೪.೮೩ ಸೇಕೆಂಡುಗಳಲ್ಲಿ ಕ್ರಮಿಸಿ ಮೋತ್ತಂದು ನೂತನ ದಾಖಲೆ.

೩. ೨೦೦೯ ಜುಲೈ ೧೦ ಟಾಟಾ ಸುಮೋ ವಾಹನಗಳ ನಡುವಿನ ೬೫ಅಡಿ ಅಂತರವನ್ನು ಕೇವಲ ೭.೬೭ಸೇಂಕಡುಗಳಲ್ಲಿ ಕ್ರಮಿಸುವ ಮೂಲಕ ವಿಶ್ವದಾಖಲೆ ನಿರ್ಮಿಸಿ "ವಂಡರ್ ಬಾಯ್ " ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ಒಂದೇ ವರ್ಷದ ಅವಧಿಯಲ್ಲಿ ೩ ವಿಶ್ವದಾಖಲೆ ನಿರ್ಮಿಸಿದ್ದು ದೋಡ್ಡ ಸಾಧನೇ ಅದರಲ್ಲೂ ವಿಶೇಷವಾಗಿ ಕಿರಿಯ ವಯಸ್ಸಿನಲ್ಲಿ ಈ ಹಿರಿಯ ಸಾಧನೆ ಗಮನಾರ್ಹ . ಈ ೩ ದಾಖಲೆ ವಿಶ್ವದಾಖಲೆ .ವಿಶ್ವದಾಖಲೆ ಅಕಾಡೆಮಿ ಮ್ಯಾನ ಮಾಡಿದೆ.

Friday, November 27, 2009

ಭಾರತದ ಹಿರೆಮೆಯ ಗರಿ ಸಚಿನ್













ಇಪ್ಪತ್ತೂ ವರುಷಗಳ ಹಿಂದೆ ಅಂದರೆ ೧೯೮೮ರಲ್ಲಿ. ೧೬ ರ ಪೂರನೋಬ್ಬ ಭಾರತ ತಂಡವನ್ನುಅ ಪ್ರ್ವವೇಶಿಸಿದ .ಆಗ ಯಾರು ಆತನ ಬಗ್ಗೆ ಸಾಧನೆ ಮಾಡಬಲ್ಲ ಎಂದು ಊಹಿಸಲು ಸಾಧ್ಯಾವಿಲ್ಲ .ಆದರೆ ಅತಂಹ ಸಾಧನೆ ಮಾಡಿದ್ದು .ಅದೆ ಮುಗ್ತ್ದ ಮುಖದ ಸಾಧನೇಯ ಅಹಂ ಇಲ್ಲದ ಸರಳ ಸ್ನೇಹ ಜೀವಿ ಭಾರತದ ಹೀರಮೇ ಗರಿಮೇ ಸಚೀನ ತೇಂಡೋಲ್ಕರ .ವಿಶ್ವದ ನಾನ ಕಡೆಗಳಲ್ಲಿ ತನ್ನ ವಿಕ್ರಮಗಳಿಂದಲೇ ಅಭಿಮಾನಿಗಳ ದಂಡು ಇದೆ .
ಎಕದಿನ ಕ್ರಿಕೆಟನಲ್ಲಿ ೧೭,೧೬೮.ಟೆಸ್ಟ್ ನಲ್ಲಿ ೧೨,೭೭೩ ಹಾಗೂ ಟ್ವೆಂಟಿ-೨೦ಯಲ್ಲಿ ೧೦ ರನ್ .ಕ್ರಿಕೆಟ ನಲ್ಲಿ ೩೦ ಸಾವಿರ ರನ್ ದಾಟಲು ೪೯ ರನ್ ಸಾಕು .ಸಚೀನ ೧೦ ವರ್ಷ ಐ.ಸಿಸಿ ಶ್ರೇಯಾಂಕ ದಲ್ಲಿ ಅಗ್ರ ೧೦ರಲ್ಲಿ ಸ್ಠಾನ ಪಡೆದಿರುವ ಎಕೈಕ ಆಟಗಾರ .೧೦ ಸಾವಿರ್ ರನ್ ದಾಟಿದ ಮೋದಲ ಆಟಗಾರ ಎಂಬ ದಾಖಲೆ ಸಚೀನ ಹೆಸರಿಗೆ ಇದೆ .೧೭ ಸಾವಿರ ವರಗೆ ಪ್ರತಿ ಸಾವಿರ ದ ಮೈಲುಗಲ್ಲು ದಾಟಿದ ಮೊದಲ ಕ್ರಿಕೆಟಿಗ ಕೂಡ ಅವರೇ .೯೧ ಅರ್ಧ ಶತಕ ಬಾರಿಸಿದ ಅದಕ್ಕೆ ೯ ಅರ್ಧ ಶತಕ ಸೇರಿಸಿದರೆ ಅರ್ಧ ಶತಕಗಳ ಶತಕ ಎಂಬ ವಿಶಿಷ್ಟ ದಾಖಲೆಯಾಗುತ್ತದೆ.ಭಾರತದ ಪರ ಅತಿಹೆಚ್ಚು ಸರಣಿ ಶ್ರೇಷ್ಠ ಪ್ರಶಸ್ತಿ ಅವರ ಪಾಲಿಗೆ ಇದೆ . ಆಸೀಸ್ ವಿರುದ್ದ ೯ ಶತಕ ಬಾರಿಸಿರುವ ಅವರು ೧೭ ಸಾವಿರ ರನ್ ಗಡಿ ದಾಟಿದ್ದು ಕೂಡ ಕಂಗರೂಗಳ ವಿರುದ್ದವೇ ಎಂಬುವುದು ಗಮರ್ನಾಹ . ಇತ್ತಿಚಿಗೆ ನೂಝಿಲ್ಯಾಂಡ೧೬೩ ರನ್ ಗಳಿಸಿದ ಬಳಿಕ ೧೭೫ ರನ್ ಗಳಿಕೆ ಯ ಈ ಇನ್ನಿಂಗ್ಸ ಮೂಲಕ ಉತ್ತಮ ಪ್ರರ್ದಶನ ತೋರಿಸಿ ವಯಸ್ಸು ಸಾಧನೆ ಗೆ ಅದ್ಡಿಯಲ್ಲ ಎಂಬುದು ತೋರಿಸಿದರು .೨೦೧೧ ರಾ ವಿಶ್ವಕಪ್ ನಲ್ಲಿ ಆಡುತ್ತೆನೆ
ಎಂದು ವಿಶ್ವಾಸ ದಿಂದ ಹೇಳುತ್ತಾರೆ. ಭಾರತಕ್ಕೆ ಇನ್ನೋಮ್ಮೆ ವಿಶ್ವಕಪ್ ತರುವ ಆಸೆ ಅವರದು .೧೭೫ ರನ್ ತಮ್ಮ ಅತ್ಯುತಮ ಇನ್ನಿಂಗ್ಸಗಳಲ್ಲೋಂದು.ಯಾವುದೆ ಗಾಸಿಫ ಗಳಿಗೆ ಅಂಟಿಕೋಳ್ಳದೆ ಕೆವಲ ತನ್ನ ಆಟದ ಮಾಂತ್ರಿಕ ದಿಂದ ಪ್ರಚಾರ ಪಡೆದವರಲ್ಲಿ ಸಚೀನ ಎಂದರೆ ತಪ್ಪಾಗದು.
ಸಚೀನ ವಿಕ್ರಮ :
*ಗರಿಷ್ಟ ಶತಕ ೪೫.
*ಈ ೪೫ ಶತಕ ಆಟಗಳ ಪೈಕಿ ೩೨ ಶತಕಗಳು ಭಾರತಕ್ಕೆ ಗೆಲವು ತಂದು ಕೋಟ್ತಿವೆ .
* ಅತೀ ಹೆಚ್ಚು ಅರ್ಧ ಶತಕ (೯೧)
*೧೯೯೮ರಲ್ಲಿ ೯ ಶತಕಗಳ ದಾಖಲೆ .
* ಒಂದು ವರ್ಷದಲ್ಲಿ ೧೮೯೪ ರನ್ ಕಲೆ ಹಾಕಿದ ದಾಖಲೆ .
*ಒಂದು ವರ್ಷ ದಲ್ಲಿ೧೦೦೦ರನ್ ನಂತೆ ಸತತ ಎಳು ವರ್ಷ ಇದೆ ಹಾದಿಯಲ್ಲಿ ನಡೆದ ಎಕೈಕ ಕ್ರಿಕೆಟಿಗ .
* ಆಸೀಸ್ ವಿರುದ್ದ ೯ ಶತಕ ಬಾರಿಸಿದ ಎಕೈಕ ಕ್ರಿಕೆಟಿಗ .
* ಆಸೀಸ್ ,ಲಂಕಾ, ಪಾಕ್ ವಿರುದ್ದ ತಲಾ ಎರಡು ಸಾವಿರ ರನ್ ಚಚ್ಚಿದ ದಾಖಲೆ .
*೧೭ ಬಾರಿ ೯೦ ರ ಗಡಿಯಲ್ಲಿ ಔಟ್ ಆದ ಎಕೈಕ ಬ್ಯಾಟ್ಸಮನ್.

Sunday, November 22, 2009

ಕರ್ನಾಟಕ ಎಕೀಕರಣ









ಕನ್ನಡಕ್ಕೆ ಶಾಸ್ತ್ರಿಯ ಸ್ಥಾನ ಬಂದು ವರುಷದ ಹುಮ್ಮಸು .
ಕಸ್ತೂರಿ ಕನ್ನಡ ಮೇಲೆ ಕನ್ನಡಿಗರಿಗೆ ಅಪಾರ ಅಭಿಮಾನ ಹಿಂದೆ ಇಂದು ಮುಂದೆ ಎಂದೆದಿಗೂ .
ಕರ್ನಾಟಕದ ಎಕೀಕರಣ ಚಳುವಳಿ ಒಂದು ಇಣಕು ನೋಟ-
ಭಾಷಿಕ ಮೊದಲ ಹರಿಕಾರರು ವಚನಕಾರೆ ಅಂದರೆ ತಪ್ಪಲ್ಲ .ಬ್ರಿಟಿಷರ ಆಗಮನ ಮತ್ತು ಪಾಶ್ಚಾತ್ಯ
ನಮ್ಮನು ಆವರಿಸಿ ಬಿಟ್ಟವು ಕನ್ನಡಕ್ಕೆ ಬದಲಾಗಿ ಇಂಗ್ಲಿಷ ತನ್ನ ಸ್ಥಾನ ಭದ್ರ
ಪಡಿಸಿಕೋಂಡಿತು,ಮರಾಠಿ,ಗುಜಾರಾತಿ, ಮಲೆಯಾಳಿ, ತೆಲಗು ಭಾಷಿಕರ್ ನಡುವೆ ಕನ್ನಡಿಗರು ಅಲ್ಪಸಂಖ್ಯಾತರಾದರು .
ನಮ್ಮದೆ ಆದ ಪರಿಕಲ್ಪನೆಗಳು ಹುಟ್ಟಿಕೊಂಡವು ."ದೇಶ"ವನ್ನು ತಾಯಿಯಾಗಿ"ನಾಡ"ನ್ನು ಮಗಳಾಗಿ ನೊಡಿದ ನೋಟ ಹಾಗು ಪ್ರೇರೆಪೆಸಿದ ಧಾಟಿಯನ್ನು ಗಮನಿಸುವುದು ಮುಖ್ಯ .ಕರ್ನಾಟಕವನ್ನು"ಭುವನೇಶ್ವರಿ" ಮೂಲಕ ಚಾರಿತ್ರಿಕ ಘಟ್ಟವನ್ನು ವಿಷ್ಲೆಸಿಸುವ , ಗುರುತಿಸುವ


ಪ್ರಯತ್ತ,ತಾಯಿ ಮುತೈದೆ ,ಕನ್ನ್ಡಡ ದೇವಿ ,ಕನ್ನಡಿಗರ ಮಾತೆ ,ಕುಲದೇವಿ,ಮಾದೇವಿ, ನೆಲದಾಯಿ ಮೋದಲಾದ ರೂಪಕ’.
ಕ್ರೀ.ಶ ೧೯೬೧ ರ ವೇಳೆಗೆ ಡೆಪ್ಯುಟಿ ಎಜ್ಯುಕೆಶನ್ ಇನ್ಸ್ಪೆಕ್ತರ್ ರಾಗಿ ಚೆನ್ನಬಸಪ್ಪ ಅವರು ಬೇಳಗಾವಿಗೆ ಬಂದರು. ಅನಂತರವೆ ಅಲ್ಲಿ ಕನ್ನಡವನ್ನು ಹುಟ್ಟುಹಾಕುವ ಚಟುವಟಿಕೆ ಆರಂಭಗೊಂಡದ್ದು .ಕಾಡ್ಡಯವಾಗಿ ಕನ್ನಡವನ್ನು ಕಲಿಸುವ ಕ್ರಮ ತಗೆದುಕೊಂಡರು.ಅಲ್ಲದೆ ಎಲ್ಲ ಬಗೇಯ್ ಸಾರ್ವಜನಿಕ ವ್ಯವಹಾರಗಳು ಕನ್ನಡದಲ್ಲೆ ಎಂಬುದರ ಬಗೆಗೆ ಸಹ.


ಧಾರವಾಡಜಿಲ್ಲೆಯ ಕುರಿತು ಆಲೂರು ವೆಂಕಟರಾಯರು. "ಪೇಶ್ವಯ ಕಾಲದಿಂದಲೂ ಈ ಜಿಲ್ಲೆಯ ಮುಖ್ಯ ಪಟ್ಟಣಗಳಲ್ಲಿಮರಾಠಿ ಬಲ್ಲವರ ಪ್ರಾಬಲ್ಯವಿತ್ತು .ಕನ್ನಡಿಗರು ಮರಾಠಿ ಕಲಿಯುವುದು ಶಿಷ್ಟಾಚಾರವಾಗಿತ್ತು .ಕನ್ನ್ಡಡಿಗರಿಗೆ ತಮ್ಮ ಪ್ರತ್ಯೇಕ ಅಸ್ವಿತ್ವ ಬಗ್ಗೆ ಅರಿವೇ ಇರಲಿಲ್ಲ ’ ಈ ವಿಭಾಗಕ್ಕೆ ಮುಂಬಯಿ ಮುಖ್ಯ ಆಡಳಿತ ಕೇಂದ್ರ ವ್ಯವಹಾರಗಳಿಗಾಗಿ ಅಷ್ತುದೂರ್ ಕ್ರಮಿಸುವುದು ಅನಿವಾರ್ಯವಗಿತ್ತು ಹುಬ್ಬಳ್ಲಿಯಿಂದ ೪೫೩ಮೈಲಿ. ವ್ಯ್ವವಹಾರವು ಮರಾಠಿಯಲ್ಲೆ ಇತ್ತು.ಉದ್ಯೋಗಕ್ಕಾಗಿ ಯುವ್ಕ್ರು ಮರಾಠಿ ಕಲಿಯಬೇಕ್ಕಿತ್ತು.ಮೈಸೂರು ಮಾಹಾರಾಜರ ಅಳವಿಕೆಯಿಂದ ಕನ್ನಡ ಭಾಷೆಗೆ ಮನ್ನಣೆ ದೋರೆತ್ತಿತ್ತು.ಆದ್ರೆ ಹೈದರ .ಟಿಪ್ಪು ಕಾಲ್ದದಲ್ಲಿ ’ಡಬ್ಬಲ-ದಪ್ಪರ’ ಪದ್ದತಿ ಬಂದಿತು.ನಾಡು ನುಡಿಗಳ ಬಗ್ಗೆ ಜಾಗ್ರುತ ರಾಗಿಸಲು ರಾಯಚೂರಿನ ,ಕರ್ನಾಟಕ ತರುಣ ಸಂಘ , ವಿದ್ಯಾಥಿಸಂಘಗಳು ಕಾರ್ಯನಿರ್ವಹಿಸಿದವು.೧೯೦೩ ರ ವೇಳೆಗೆ ಉತ್ತರ ಕರ್ನಾಟಕದ್ಲ್ಲಿ ಭಿನ್ನ ರೀತಿಯ ಭಾಷೆ ಚಿಂತನೆಗಳು ಆರಂಭಗೊಂಡಿದ್ದವು . ಕರ್ನಾಟಕ ವಿದ್ಯಾವರ್ಧಕ ಸಂಘವು ಇದೆ ವೇಳೆಯಲ್ಲಿ ಸಭೆ ಸಮಾರಂಭಗಳನ್ನು ಎರ್ಪಡಿಸಿ ಭಾಷಾ ಪ್ರಜ್ನೆಯನ್ನ್ನು ಮೂಡಿಸುತ್ತಿತು. ಇಲ್ಲಿ ಬೆನಗಲ ರಾಮರಾಯರ ಮುಖ್ಯ ಹಾಗೂ ಉತ್ತರ್ ಕನ್ನಡಿಗರು ಒಂದೂಗೂಡಬೇಕಾದ ಅನಿವಾರ್ಯತೆ ಎಕೀಕರಣದ ಮೊದಲ ಭಾಷಣ ಇದು . ವಿದ್ಯಾವರ್ದಕದ ಸಂಘದ ’ವಾಗ್ಭೂಷಣ್’ದಲ್ಲಿ ಕನ್ನಡ -ಕರ್ನಾಟಕ ಪರ ಸಾಹಿತ್ಫ ಪ್ರಕಟ ಆಗುತ್ತಿತ್ತು .೧೯೦೭ ಫೆಬ್ರವರಿ ಸಂಚಿಕೆಯ ಲೆಖನ ಎಕೀಕರಣದ ಬಗ್ಗೆ ಕನ್ನಡಿಗರು ಆಲೋಚಿಸುವಂತೆ ಮಾಡಿದ್ಅ ಮೋದಲ ಲೇಖನ .೧೯೦೭ ಜೂನ ೨ ಮತ್ತು ೩ ನೇ ಯ ದಿನ ಧಾರವಡದಲ್ಲಿ ಅಖಿಲ ಕರ್ನಾಟಕ ಗ್ರಂಥಕರ್ತರ ಸಮ್ಮೆಳನದ ಸಭೆ . ಕನ್ನಡ ಸಾಹಿತ್ಯ , ಗ್ರಂಥಗಳ ಪ್ರಕಟನೆಯ ಹಿನ್ನ್ಲಲೆಯಲ್ಲಿ ಮೂದಲ ಸಭೆ , ಆಲೂರರ ನೇತತ್ವದಲ್ಲಿ ೩೦-೫-೧೯೦೮ ರಂದು ೨ನೇ ಸಭೆ ಧಾರವಾಡದಲ್ಲಿ . ಭಾಷವಾರು ಚಳುವಳಿಗಳಲ್ಲಿ ಮೂದಲ ಅಸಿತ್ವ ಪಡೆದ ಪಾಂತ್ಯ ಬಂಗಾಳ .ಇದು ಇತರೆ ಭಾಷೆ ಗಳಾನ್ನಾಡುವರಿಗೆ ಚಳುವಳಿಯಲ್ಲಿ ತಲ್ಲಿನವಗುವಂತೆ ಮಾಡಿತು .ರಾಷ್ಟ್ರಭಿಮಾನ ಮತ್ತು ಕನ್ನಡಭಿಮಾನ ಮಾಡಿಸುವಲ್ಲಿ ಅನೇಕ ಪತ್ರಿಕೆಗಳು ಪಾತ್ರವಹಿಸಿದವು ತಿಲಕಸಂದೇಶ(ಮಂಗಳೂರು) ವಿಶ್ವ ಕರ್ನಾಟಕ (ಬೆಂಗಳೂರು) ಕರ್ಮವೀರ ,ವಿಜಯ ,ರಾಜಹಂಸ ,ಕರ್ನಾಟಕವ್ರುತ್ತ , ಜಯ ಕರ್ನಾಟಕ , ಜಯಂತಿ (ಧಾರವಾಡ) ಕನ್ನಡಿಗ (ಬಾಗಲಕೋಟೆ )ಇತ್ಯಾದಿ. ೨೫-೧೨- ೧೯೨೪ ರಲ್ಲಿ ’ಕರ್ನಾಟಕ ಎಕೀಕರಣ ’ ಸಂಘ ಅಸಿತ್ವಕ್ಕೆ ಬಂದಿತು .ದ.ರಾ.ಬೇಂದ್ರೆ ಮತ್ತು ಬೇಟಗೇರಿ ಕ್ರಷ್ಣ ಶರ್ಮ ನವರಾತ್ರಿ ಹಬ್ಬವನ್ನು"ನಾಡಹಬ್ಬ"ವನ್ನಾಗಿ ಆಚರಿಸುವಉಂತೆ ಮಾಡಿದರು.೧೯೨೬ ರ್ಲ್ಲಿ’ ಮರಾಠಿ ಸಾಹಿತ್ಯ ಸಮ್ಮೆಳನ ’ನಡೆಸಬೇಕು ಎಂದು ಹಠ ತೋಟ್ಟಿದ್ದು ಗಮನಿಸಬೇಕಾದ ಸಂಗತಿ. ’ಎಕೀಕರಣದ ಸಂಘಕ್ಕೆ ಬೆನಗಲ ರಾಮರಾಯರು ಅಧ್ಯಕ್ಶರಾಗಿಯು.ಬಿ ಶಿವಮೂರ್ತಿ ಶಾಸ್ತ್ರಿಗಳು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದ್ರರು .ಈ ಸಂಘ ಹೇಚ್ಚಾಗಿ ಗಡಿನಾಡ ಪ್ರದೇಶಗಳಲ್ಲಿ ಕಾರ್ಯಕ್ರಮ ಹಮ್ಮಿಕೋಳ್ಳುತ್ತಿತ್ತು.ರಬಕವಿ , ಬನಹಟ್ಟಿ , ಜಮಖಂಡಿ, ಮುಧೂಳ ಮೂದಲಾದ ಸಂಸ್ಥಾನಗಳಲ್ಲಿ ಎಕೀಕರಣ ಜಾಗ್ರುತಿ ಮೂಡಿಸುವ ಕಾರ್ಯ ಕ್ರಮಹಮ್ಮಿಕೋಳ್ಳಲಾಯಿತು.ಸೋಲ್ಲಾಪುರ ಜಿಲ್ಲಾ ಕಛೇರಿಯಲ್ಲಿ ಇನ್ನುಮುಂದೆ ಕನ್ನಡವೇ ಆಡಳಿತಭಾಷೆ ಆಗಬೇಕು ಎಂದು ಒಂದು ಶಿಷ್ಟ ಮಂಡಲ್ಲವನ್ನೆ ರೂಪಿಸಿದರು .ಜೋತೆಗೆ ಕನ್ನಡ ಭಷೆ ಮತ್ತು ಕರ್ನಾಟಕ ಪ್ರದೇಶಕ್ಕಾಗಿ ಪ್ರ್ತೆತ್ಯೆಕ ಬಾನುಲಿ ಕೇಂದ್ರ ಬಯಸಿ ದೇಹಲಿ ಮತ್ತು ಮುಂಬಯಿ ಸರ್ಕಾರಗಳ ಮೇಲೆ ಒತ್ತಡ ತರಲಯಿತು. ಹುಬ್ಬಳ್ಳಿಯಂತು "ನ್ಯೂಯಾರ್ಕ ಟೈಂಸ" ನಲ್ಲಿ ಈ ಬಗ್ಗೆ ಎರಡು ಕಾಲಂಗಳಲ್ಲಿ ಸುದ್ದಿ ಪ್ರಕಟವಾಗುವಷ್ತು ಪ್ರರಿಣಾಮಾಕಾರಿ ಆಗಿತ್ತು . ಈ ಸಂಧರ್ಭದಲ್ಲಿ ಪಾಟೀಲ ಪುಟಪ್ಪನವರಿಂದ ಎಕೀಕರಣ ಕಾರ್ಯ ಗಮನಾರ್ಹವಾಗಿದ್ದವು. ಕನ್ನಡ ಭಾಷೆ ಸಾಹಿತ್ಯಗಳನ್ನು ಅಭಿವದ್ಧಿಪಡಿಸುವ ,ಗ್ರಂಥಗಳ ಪ್ರಕಟನೆಯ ಕಡೆಗೆ ಗಮನಹರಿಸುವ ಒಂದು ವೇದಿಕೆ ಅಗತ್ಯ ಇತ್ತು . ಅದಕ್ಕೆ ಮುಂಬಯಿ -ಕರ್ನಾಟಕ .(ಅದರಲ್ಲೂ ಧಾರವಾಡ ಕನ್ನಡಿಗರ ಪ್ರಯತ್ನನಗಳೆ ಮೂದಲಿನವು.

Saturday, November 21, 2009

ನನಗೆಂಥ ಹುಡುಗ ಬೇಕು?

ನನಗೆಂಥ ಹುಡುಗ ಬೇಕು ?
ಎಂದು ಹೇಳಲೇ ನಾನು ನಗುವುದಿಲ್ಲ ತಾನೇ ನೀವು?
ರೂಪದಲ್ಲಿ ಮನ್ಮಥನೇ ಆಗಿರಬೇಕ್ಕಿಲ್ಲ
ಅಂಗಾಗಳೆಲ್ಲಾ ಸರಿ ಇದ್ದರೆ ಸಾಕು


ಐ.ಎ.ಎಸ್, ಕೆ.ಎ.ಎಸ್, ಮಾಡಿರಲೇಬೇಕಿಲ್ಲ
ವಿದ್ಯಾವಂತನಾಗಿದ್ದರೆ ಸಾಕು
ಕವಿಯೆ ಆಗಿರಬೇಕಿಲ್ಲ
ಕವಿತೆ ಓದುವ ಸಾಮರ್ಥ್ಯ ಇದ್ದರೆ ಸಾಕು
ಸಾಹಿತಿಯೇ ಆಗಿರಬೇಕಿಲ್ಲ
ಸಾಹಿತ್ಯವನ್ನು ಅಸ್ವಾದಿಸುವ
ಹೃದಯ ಸಾಕು






ಶ್ರೀಮಂತನಾಗಿಬೇಕಿಲ್ಲ
ಹೃದಯ ಶ್ರಿಮಂತಿಕೆ ಇದ್ದರೆ ಸಾಕು
ಸುಖದ್ ಸುಪ್ಪತ್ತಿಗೆಯೇ ಇರಿಸಬೇಕ್ಕಿಲ್ಲ
ಸಾಕುವ ದಾರಿ ಒಳ್ಳೆಯದಿದ್ದರೆ ಸಾಕು


ಆಭರಣ ಮುತ್ತು ರತ್ನಗಳೇ
ಬೇಕೇಂದು ಕೇಳುವುದಿಲ್ಲ
ಸಮಾಜದಲ್ಲಿ ಆದರಿಸುವ
ಗುಣ ಬಂದಿದ್ದರೆ ಸಾಕು

ಸಂದೆಹ ಪ್ರವೃತಿ ಇಲ್ಲದಿದ್ದರೆ ಸಾಕು
ಒಲವು ವೈಯ್ಯಾರಗಳ ಪ್ರದರ್ಶನ ಬೇಕ್ಕಿಲ್ಲ
ಒಲಿದ ಮನ ಮೇಚ್ಚಿದ್ದರೆ ಸಾಕು


ಸಂತೋಷ ಪಡಿಸಲು ಜೇಬಿನ
ಕಾಂಚನ ಖಾಲಿ ಮಾಡಬೇಕಿಲ್ಲ ಬೇಚ್ಚಗಿನ ಪ್ರಿತಿಯ ಅಪ್ಪುಗೆಯೋಂದೆ ಸಾಕು
ದುಡಿದು ದುಡಿದು ಹಣ್ಣಾಗಬೇಕಿಲ್ಲ ದುಶ್ಚಟ ಒಂದು ಇಲ್ಲದ್ದಿರೆ ಸಾಕು


ಗುಣಸೌರ್ವಭೌಮನಾಗಿರಲೇ ಬೇಕಿಲ್ಲ
ಗಂಡಸು ಎನ್ನುವ ದೈರ್ಯವಿದ್ದರೆ ಸಾಕು
ನಿನ್ನ ಪ್ರೀತಿ ತೊರಿಸಲು ತಾಜಮಹಲನಂತಹ
ಅರಮನೆ ಕಟ್ಟಿಸಬೇಕಿಲ್ಲ
ಅವನ ಮನಸ್ಸಲ್ಲಿ ನನ್ನ ಕನುಸುಗಳಿಗೆ ಜಾಗವಿದ್ದರೆ ಸಾಕು


ದಿನವೇಲ್ಲಾ ನನ್ನ ಮುಂದೆ ಕುಳಿತುಕೋಳ್ಳಬೇಕಾಗಿಲ್ಲ
ನನ್ನ ಭಾವನೇಗಳಿಗೆ ಸ್ಪಂದಿಸುವ ಮನಸ್ಸು ಒಂದು ಇದ್ದರೆ ಸಾಕು

Sunday, November 8, 2009

ಈಜು ಕೊಳದಲೋಬ್ಬ ಸಾಧಕ

ವಿಕಲ ಚೇತನ ಎನ್ನುವ ಪದ ನಿಜವಾಗಿಯು ಚೇತನ ಹೇಚ್ಚಿಸುವ ಪದವೇ ಅಂಗಾಗಗಳು ಸರಿ ಇದ್ದರೂ ಕಾರಣ ನೀಡಿ ಜಾರಿಕೋಳ್ಳುವರೇ ಹೇಚ್ಚು . ಮನುಷ್ಯನಿಗೆ ಆತ್ಮವಿಶ್ವಾಸ, ತನ್ನ ಮೇಲೆ ಬಲವಾದ ನಂಬಿಕೆ ಇದ್ದರೆ ಎನುಬೇಕಾದರು ಮಾಡುವ ಗಟ್ಟಿತನ ಬರುತ್ತದೆ . ಸಾಮ್ಯಾನ ಜನರಿಗೇ ಆಯಿತು .ಆದರೆ ಊಹೇಗೆ ಮೀರಿ ನಿಂತ ಛಲವಂತಿಕೇಯ ಪ್ರತ್ಯಕ್ಷ ಮಾದರಿ ಈ ಈಜು ಪಟು. brittle bone disease(BBD) ಕಾಯಿಲೇಯಿಂದ ಬಳಲುತ್ತಿರುವ ದಯನೀಯ ಅಂಗವೈಕಲ್ಯ ಹೊಂದಿರುವ ಹನ್ನೋದರ ಪೋರ್ ಈಗ ನಕ್ಷತ್ರವಾಗಿದ್ದಾನೆ .ಮೊಯಿನ .ಎಂ.ಜುನೆದಿ ಕೋಲ್ಕತಾದಲ್ಲಿ ಈಚೆಗೆ ನಡೆದ ರಾಷ್ಟ್ರಮಟ್ಟದ ೧೦ನೇ ಪ್ಯಾರಾಲಿಂಪಿಕ್ಸ ಈಜು ಚಾಂಪಿಯನ್ ಷಿಪ್ ನ್ ೫೦ ಮೀಟರ್‍ ಪ್ರೀಸ್ಟೆಲ್ ಮತ್ತು ಬ್ಯಾಕ್ ಸ್ಟ್ರೋಕನಲ್ಲಿ ೨ ಚಿನ್ನ ಗೆದ್ದಿದ್ದಾನೆ ಎಂದರೇ ನಂಬಲೆ ಬೇಕು. ಇತ ಬೆಳಗಾವಿಯ ಮಸ್ತಾಕ ಮತ್ತು ಕೌಸರ್ ದಂಪತಿಯ ಹಿರಿಯ ಪುತ್ರ ಮೋಯಿನ್ ಹುಟ್ಟು ವಿಕಾಲಂಗ ವಂಶವಾಹಿನಿಯ ದೊಷದಿಂದ ಗುಣಪಡಿಸಲಾದ brittle bone disease


ಕಾಯಿಲೆ ಪೀಡಿತ .ಕಾಲುಗಳು ಇಲ್ಲ .ಕೈ ಇದ್ದರು ತ್ರಾಣವಿಲ್ಲ ಇಡೀ ದೇಹದಲ್ಲಿ ಮುಖ ಮಾತ್ರ ಅಚ್ಚುಕಟ್ಟಾಗಿ ಇರುವುದು.ವಿದ್ಯಾವಂತೆಯಾದ್ ತಾಯಿ ಮಗನ ಚಿಕಿತ್ಸೆಗಾಗಿ ಅಲಿದು ಅದಕ್ಕೆ ಉಪಚಾರವೇ ಇಲ್ಲ ಎಂದಾಗ ಛಲಬೀಡದೆ ಮನೆಯಲ್ಲಿ ಇಂಗ್ಲಿಷ ಕಲಿಸುವ ಸಾಹಸ ಮಾಡಿದ್ದಾಳೆ .


ಅದಕ್ಕೆ ಪ್ರತಿಯಾಗಿ ಆತಕೂಡ ಆಷ್ಟೆ ಜಾಣ ನಿರ್ಗಳವಾಗಿ ಟೈಪ ಮಾಡಬಲ್ಲ ,ಅರಳು ಹುರಿದಂತೆ ಮಾತನಾಡಬಲ್ಲ ಕೂಡ . ತರಭೇತುದಾರ ಉಮೇಶ ಕಲಘಟಗಿ ಕಣ್ಣಿಗೆ ಬಿದ್ದಿದೇ ತಡ ಆತನ ಪ್ರತಿಭೆಗೆ ಇನ್ನಷ್ಟು ಮೆರಗೂ ಬಂದ್ದಿದೂ . ಈಗ ಇತ ೧ ಗಂಟೆ೧೦ ನಿಮಿಷ ಕಾಲ ನೀರಿನಲ್ಲಿ ಈಜು ಇದ್ದು ತನ್ನದೆ ದಾಖಲೇ ಮಾಡಿದ್ದಾನೆ. ಸಾಧಕರಿಗೆ ಯಾವುದೇ ವೈಕಲ್ಯ ಅಡ್ಡಿ ಬರುವುದಿಲ್ಲ ಎನುವುದಕ್ಕೆ ಈ ಪೋರ ಸಾಕ್ಷಿ .













Sunday, October 25, 2009

ಕೆಂಪು ಹರಿಸಿದ ಪ್ರೀತಿ ...



ಪತ್ರಿಕೆಯಲ್ಲಿ ಕೊಲೆ ಇರಿತ ಬೆದರಿಕೆ ಇವುಗ್ಲ್ದೆ ಸುದ್ಧಿ ಇವೆಲ್ಲ ಪತಾಕನ ಕೆಲಸವಲ್ಲ ಸಿದಾ ಸದಾ ಹುಡ್ಗ್ ಕೃತ್ಯ . ಅವಳಿ ನಗರದಲ್ಲಿ ಅಂತು ಇದರ ಪ್ರಮಾಣ ಏರುತಿದೆ . ಕಾರಣ ಚೆಂದ ಮಾತು , ದಿನ ಪೂರ್ತಿ ಹುಡ್ಗಿರ್ರ್ ಹಿಂದೆ ಸುತ್ತ ತಿರುಗಿ ಅವರ ಸ್ನೇಹಾ ಗಳಿಸುತ್ತಾರೆ . ನಂತರ ಹಾರಾಡುವ ಪ್ರಣಯ ಪಕ್ಷಿಗಳು . ಮುಂದೆ ಸಣ್ಣ ಜಗಳಗಳು ಏನೆಲ್ಲಾ ಮಾಡಿಬಿಡುತ್ತವೆ . ಹುಡುಗಿರೆ ಹುಶರಾ !



ವಿಜಯನಗರ ದ ಮನೆ ನುಗ್ಗಿ ಹಲ್ಲೆ ಮರೆಯುವ ಮುನ್ನವೇ ಹೋಟೆಲ್ ನಲ್ಲಿ ನಡೆದ ಕೊಲೆ ಪ್ರಕರಣ ಇವತ್ತಿನ ಪತ್ರಿಕೆ ಯಲ್ಲಿ ಪ್ರಿತಿಸದ ಕಾರಣಕ್ಕಾಗಿ ಮನೆ ನುಗ್ಗಿ ಮನೆಯವರ ಮುಂದೆ ಹಲ್ಲೆ ಮಾಡ್ದಿದು ಇವೆಲ್ಲ ಅಮಾನುಷ ಕೃತ್ಯ , ಒಬ್ಬರೆ ತಿರುಗಲು ಭಯ ಬಿಳುವಂತೆ ಮಾಡಿದೆ .


ಜೊತೆಗೆ ಲವ್ -ಜಿಹಾದ ಪ್ರಕರಣ ಕೂಡ ಹೆಚುತ್ತಿದೆ ಅದಕ್ಕಾಗಿ ಯುವ ಜನಾಂಗ ಎಚ್ಚೆತ್ತು ಕೊಳ್ಳಬೇಕಾಗಿದೆ .ಓದುವದನ್ನು ಬಿಟ್ಟು ಬೇರೆ ಕಡೆ ಗಮನ ಹರಿಸದಂತೆ ನೋಡಿಕೊಳ್ಳಬೇಕು .ಪ್ರೀತಿ-ಪ್ರೇಮ ಎಂದು ತೆಲೆ ತಿನುವ್ರಿಗೆ ಬುದ್ಧಿ ಕಲಿಸಬೇಕಿದೆ . ನಯ ವಿನಯ ದಿಂದ ಆರಂಭ ವಾಗುವ ಪ್ರಣಯ ಜೀವವನ್ನೇ ಬಲಿ ಪಡೆಯುತಿದೆ . ಇದಕ್ಕೆ ಕಡಿವಾಣ ಹಾಕಬೇಕಿದೆ .



Tuesday, October 6, 2009

ತಪ್ಪು.............



ಗೆಳಯ ನೀ ಸಿಕ್ಕಿದ್ದು ಸುಮ್ಮನೆ
ಅದು ನಿನ್ನ ತಪ್ಪಲ್ಲ, ನಿನ್ನ
ನಗುವ ಬೇರೆ ತಿಳಿದಿದ್ದು
ನನ್ನ ಮನದ್ ತಪ್ಪು



ಗೆಳಯ ಸ್ನೇಹದಿ ಆಡಿದ
ನಿನ್ನ ಮಾತಿನ ಪರಿ ತಪ್ಪಲ್ಲ
ಮಾತುಗಳ ಅರ್ಥ ಬೇರೆ ತಿಳಿದದ್ದು ನನ್ನ ಮನದ ತಪ್ಪು
ಗೆಳೆಯ, ಪಳ ಪಳ ಮಿನುಗುವ
ನಿನ್ನ ನಯನಗಳ ನೋಟ
ಬದಲಿ ತಿಳಿದುದ್ದೆನ್ನ ತಪ್ಪು!
ಗೆಳೆಯ, ನನ್ನ ಜಾಣ್ಮೆ ಹೋಗಳಿದ್ದು
ನಿನ್ನ ತಪ್ಪಲ್ಲ ನಿನಗೆ ನಾನಿಷ್ಟವೆಂದು
ತಿಳಿದುದು ನನ್ನ ತಪ್ಪು
ಪ್ರತಿ ನೋಟ ಮಾತು,ಭಾವ
ನನಷ್ಟಕ್ಕೆ ತಪ್ಪು ತಿಳಿದೆ



 

sakhi © 2008. Template Design By: SkinCorner